Monday, March 22, 2010

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ!

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ||

ಕದಬಾಗಿಲಿರಿಸಿದ ಕಳ್ಳ ಮನೆಇದು
ಮುದದಿಂದಲೋಡ್ಯಾಡೋ ಸುಳ್ಳು ಮನೆ |
ಇದಿರಾಗಿ ವೈಕುಂಠವಾಸಮಾಡುವಂತ
ಪದುಮನಾಭನ ದಿವ್ಯ ಬದುಕುಮನೆ ||೧||

ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ
ಕೇಳಯ್ಯ ಹರಿಕಥೆಶ್ರವಣಂಗಳ |
ನಾಳೆ ಯಮದೂತರು ಬಂದೆಳೆದೊಯ್ವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ||೨||
ಮಡದಿಮಕ್ಕಳು ಎಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಿ ನಡೆಯದಿರು |
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ||೩||

ಯುಗಯುಗಾದಿ ಕಳೆದರೂ

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
– ಅಂಬಿಕಾತನಯದತ್ತ

Friday, February 26, 2010

ಕೃಷ್ಣ ಏನಬಾರದೇ ಕೃಷ್ಣನ ನೆನೇದರೆ ಕಷ್ಟ ಒಂದಿಷ್ಟಿಲ್ಲ
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೇ

ಮಲಗಿದ್ದು ಮೈಮುರಿದು ಎಳುತ್ತಲೊಮ್ಮೆ ಕೃಷ್ಣ ಏನಬಾರದೇ
ನಿತ್ಯ ಸೂಳಿತಾಡುತ ಮನೆಯೊಳಗಾದರೂ ಒಮ್ಮೆ ಕೃಷ್ಣ ಏನಬಾರದೇ

ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ ಕೃಷ್ಣ ಏನಬಾರದೇ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಏನಬಾರದೇ

ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಏನಬಾರದೇ
ಪರಿಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಏನಬಾರದೇ

ಕಂದನ ಬೀಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಏನಬಾರದೇ

ಬಹು ಚೆಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಏನಬಾರದೇ

ಗಂಧವ ಪೂಸಿ ತಾಂಬುಲವ ಮೆಲುವಾಗ ಕೃಷ್ಣ ಏನಬಾರದೇ
ತನ್ನ ಮಂದಗಮನೆ ಕೂಡಿ ಸರಸವಾಡುತಲೊಮ್ಮೆ ಕೃಷ್ಣ ಏನಬಾರದೇ

ನೀಗದಾಲೋಚನೆ ರೋಗೋಪದ್ರದಲೊಮ್ಮೆ ಕೃಷ್ಣ ಏನಬಾರದೇ
ಒಳ್ಳೇ ಬೊಗ ಪಡೇದು ಅನುರಾಗದಿನ್ದಿರುವಾಗ ಕೃಷ್ಣ ಏನಬಾರದೇ

ದೂರಿತ ರಾಶಿಗಳನು ತರಿದು ಬಿಸಾಡಲು ಕೃಷ್ಣ ಏನಬಾರದೇ
ನಮ್ಮ ಗರುಡ ವಾಹನ ಸಿರಿ ಪುರಂದರ ವಿಠ್ಠಲನ ಕೃಷ್ಣ ಏನಬಾರದೇ

Sunday, November 22, 2009

ಅವಳ ಕಣ್ಣಗಳು ದಾರಿಯ ಕಡೆಗಿದ್ದರೂ ದ್ರಷ್ಟಿ ಶೂನ್ಯದಲ್ಲಿತ್ತು.

ಈ ವರ್ಷ ನನ್ನ ಅತಿ ದೊಡ್ಡ ಸಾಧನೆ ಅಂದ್ರೆ - ಭೈರಪ್ಪನವರ ಕಾದಂಬರಿಗಳನ್ನ ಓದಿದ್ದು.
ಓದಬೇಕಾಗಿರೋದು - ದಾಟು, ಮಂದ್ರ ಮತ್ತು ಅಂಚು ಮಾತ್ರ.
ಹೋದ ವರ್ಷ ಬಸವಕಲ್ಯಾಣಕ್ಕೆ ಹೋದಾಗ ಮನೆಯರೆಲ್ಲಾ ಕಾಯಿ-ಕರ್ಪೂರ
ಅದು-ಇದು ಅಂತ ತಮ್ಮ ಖರೀದಿ ನಡಸಿದ್ರು. ನಾನ ಏನ ಮಾಡೋದು ಇಲ್ಲಿ
ಅಪ್ಪ ಅಮ್ಮ ಎಲ್ಲಾ ಪೂಜಾ ಸಾಮಗ್ರಿ ಖರೀದಿ ಮಾಡ್ತಿದ್ರು. ಸುಮ್ನೆ ಹಾಗೆ ಒಂದ
ಸುತ್ತ ಹಾಕೋಣ ಬಸವಣ್ಣನವರ ವಚನಗಳ ಪುಸ್ತಕನಾದ್ರೂ ಕೊಳೋಣ ಅಂತಾ
ಪುಸ್ತಕದ ಅಂಗಡಿ ಹೊಕ್ಕೆ.

ಹಾಗೆ ಇರೋ ಪುಸ್ತಕಗಳ ಮೇಲೆ ಕಣ್ಣ ಹಾಯಿಸಿದರೆ - "ಬಸವಣ್ಣನವರ
ವಚನಗಳು" ಮತ್ತು ಭೈರಪ್ಪನವರ "ನಿರಾಕರಣ" ಕೊಳೊಂದೆಂದು ತೀರ್ಮಾನ
ವಾಯ್ತು. ದೇವರ ದರ್ಶನ ಹಾಗು ಬಸವಣ್ಣನವರು ಐಕ್ಯವಾಗಿರೋ ಸ್ಥಳ ನೋಡಿ
ಊರಿಗೆ ಹೊರಡೋ ಸಮಯದಲ್ಲಿ 'ನಿರಾಕರಣ' ಓದೋಕೆ ಶುರುಮಾಡಿದೆ.
ಹಾಗೆ ವೈರಸ್ ತರಹ ಓದ್ತಾ ಹೋದೆ, ಮರುದಿನ ನಮ್ಮ ಊರಿನಿಂದ ಚೆನ್ನೈಗೆ
ಬರೋ ಹೊತ್ತಿನಲ್ಲಿ 'ನಿರಾಕರಣ' ಮುಗಿದಿತ್ತು.

'ನಿರಾಕರಣ'ದ ವಿಷಯ ತುಂಬಾ ಹಿಡಸ್ತು, ನನ್ನ ಕೆಲವು ಭಾವನೆಗಳ ಬಗ್ಗೆ
ವಿಚಾರ ಮಾಡೋಕ್ಹಸ್ತು. ಆಮೇಲೆ ಪ್ರತಿ ಸಾರಿ ಬೆಂಗಳೂರಿಗೆ ಹೋದಾಗ
ಕಾಮತ ಹೋಟೆಲ್ನ ಜೋಳದ ರೊಟ್ಟಿ ಊಟ ಮತ್ತು ಭೈರಪ್ಪನವರ ಕಾದಂಬರಿ
ಗಳ ಖರೀದಿ ಖಾಯಂವಾಯ್ತು.

ಭೈರಪ್ಪನವರ ಎಲ್ಲಾ ಕಾದಂಬರಿಯಲ್ಲಿ ನಂಗೆ ಇಷ್ಟವಿರೋ ಸಾಲುಗಳಿವೆ.
ಅವುಗಳ ಪಟ್ಟಿ ಮಾಡೋಣ ಅಂತ ಒಂದ ಯೋಚನೆ ಮಾಡೋಣಾಂತ ಇತ್ತೀಚಿಗೆ
'ಸಾರ್ಥ' ಓದುವಾಗ್ ಹೊಳಿತು.

'ಸಾರ್ಥ'ದಿಂದ ನನ್ನ ಮೆಚ್ಚಿನ ಸಾಲುಗಳು, ನಿಮಗೂ ಹಿಡಸಬಹುದು-
-------------------------------------------------------------------------

೧. ದುಃಖ ನೋವಿಗಿಂತಲೂ ದೊಡ್ಡದು. ಯಾಕಂದ್ರೆ, ನೋವು ಇಂದ್ರಿಯಗಳಿಗೆ
ಸಿಮೀತವಾಗಿದ್ದು. ದುಃಖ ಬುದ್ಧಿ, ಮನಸಿಗ್ಗೆ ಸಂಭದಪಟ್ಟದ್ದು.

೨. ಮತಿ ಅಂದ್ರೆ ಬುದ್ಧಿ. ಬುದ್ಧಿಯ ಗ್ರಹಿಕೆಯೇ ಮತ. ಪ್ರಪಂಚದಲ್ಲಿ ಎಷ್ಟು
ಜನರಿದ್ದಾರೋ ಅಷ್ಟು ಬುದ್ಧಿಗಳಿವೆ. ಅಷ್ಟು ಗ್ರಹಿಕೆಗಳಿವೆ. ಅಷ್ಟು ಮತಗಳಿರುತ್ತವೆ.

೩. ದೇವರಿಗಿಂತ ಸ್ವತಂತ್ರ ದೊಡ್ಡದು.

೩. ಮನಸ್ಸು ನಮ್ಮ ಸಂಕಟದ ಕರೆಗೆ ಒಗೂಡುವ ಒಂದು ಶಕ್ತಿಯುನ್ಟೆಂಬ
ಶ್ರದ್ಧೆಯನ್ನವಲಂಬಿಸಿದೆ .

೪. ಕೃಷ್ಣ ಯೋಗಿ. ಸನ್ಯಾಸಿಯಲ್ಲ.

೫. ಅವಳ ಕಣ್ಣಗಳು ದಾರಿಯ ಕಡೆಗಿದ್ದರೂ ದ್ರಷ್ಟಿ ಶೂನ್ಯದಲ್ಲಿತ್ತು.

೬. ವೀರ ಶೂರ ತಂತ್ರ ತ್ಯಾಗ ಯೋಗ ಶ್ರಂಗಾರ ಲೌಕಿಕ ಪಾರಮಾರ್ಥಿಕ
ಪ್ರವ್ರತ್ತಿ ನಿವ್ರತ್ತಿ ವೈರಾಗ್ಯ ಕರ್ಮ ನಿಷ್ಕಾಮಕರ್ಮ ಎಷ್ಟೂಂದು ಸಂಕೀರ್ಣ
ವಾಹಿನಿಗಳ ಸೆಲೆ ಅವನು! ಕೃಷ್ಣ.

'ತಬ್ಬಲಿ ನೀನಾದೆ ಮಗನೆ'ದಿಂದ ನೆನಪಿರೋ ಈ ಸಾಲು

1. ಅವನಿಗೆ ಇಂತಹ ಧೈರ್ಯ, ಸಂಕಲ್ಪವೆಲ್ಲಿಂದ ಬಂದಿದೆ? ಅವನಿಗಿರೋ ನಂಬಿಕೆ
ಮತ್ತು ಶ್ರದ್ದೆಯಿಂದರಬೇಕು.

'ಮಭಾಭಾರತ'ದಿಂದ
----------------------
ಪಾಂಡವರು, ಕೃಷ್ಣ ಮತ್ತು ಅವರ ಹಿತೈಷಿಗಳು ಕೌರವರ ಮೇಲೆ ಯುದ್ಧ ಸಾರೋ
ಬಗ್ಗೆ ಚಿಂತನೆ ನಡಿಸೋವಾಗ, ಕೃಷ್ಣ 'ಸಂಧಾನ'ಮಾರ್ಗ ಪ್ರಸ್ತಾಪಪಿಸುತ್ತಾನೆ.
ಆಗ -

೧.

ಭೀಮ - ನಾನು ದ್ರೌಪದಿಗೆ ಕೊಟ್ಟ ಮಾತು ಮರತೇನು ಕೃಷ್ಣ? ಆ ದುಶ್ಯಾಸನ
ಎದೆ ಹಿರಿ ಅವನ ರಕ್ತ ತಂದು ದ್ರೌಪದಿಯ ಮುಡಿಗೆ ಹಚ್ಚದಿದ್ದರೆ ನಾನು
ಪಾಂಡುಪುತ್ರ ಭೀಮನಲ್ಲ.

ಕೃಷ್ಣ - ಮನುಕುಲದ ಶಾಂತಿಗಿಂತ ನಿನ್ನ ಮಾತೆ ದೊಡ್ಡದಾ?

ಕೃಷ್ಣ ಕುರುಕ್ಷೇತ್ರ ಯುದ್ಧ ತಡಿಯೋಕೆ ಹಲವು ಪ್ರಯತ್ನ ಮಾಡಿದ್ರು, ದುರ್ಯೋದನ
ಯಾವುದಕ್ಕೂ ಒಪ್ಪೋಲ್ಲ. ಕೊನೆಗೆ ಯುದ್ಧವಾಗುತ್ತೆ.

ಯುದ್ಧಮಾಡು ಎಂದು ಬೋಧಿಸದರೂ, ಕೃಷ್ಣ ಶಾಂತಿಪ್ರೀಯ.

೨. ತನ್ನ ಸ್ವಾರ್ಥಕ್ಕಾಗಿ ಮಾಡುವ ಆಕ್ರಮಣ ನ್ಯಾಯವಾದದ್ದಲ್ಲ.